ಅಬ್ರಾಕ್ಸಸ್
	ಗ್ರೀಕಿನಲ್ಲಿ ಬರೆದು ಅದರ ಅಕ್ಷರಗಳನ್ನು ಅಂಕೆಗಳನ್ನಾಗಿ ಓದಿದರೆ 365 ಎಂದಾಗುವ ಒಂದು ಶಬ್ದ. ಇದನ್ನು ಕೆತ್ತಿದ ಕಲ್ಲನ್ನು ರಕ್ಷಾಯಂತ್ರವಾಗಿ ಬಳಸಲಾಗುತ್ತಿತ್ತು. 365 ಸ್ವರ್ಗಗಳ ಉದ್ಗಮಕ್ಕೆ ಕಾರಣನಾದ ದೇವರ ಹೆಸರಾಗಿ ಈ ಪದವನ್ನು ಅಲೆಗ್ಜಾಂಡ್ರಿಯದ ಬ್ಯಾಸಿಲೈಡಿಸ್ ಪಂಥದ ಅಧ್ಯಾತ್ಮ ರಹಸ್ಯ ಜ್ಞಾನವಾದಿಗಳು ಬಳಸಿದ್ದಾರೆ.					 
  
(ಜಿ.ಸಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ